ಜಲಾಧಿವಾಸ ಕೆರಾಡಿಯ
ಕೇಶವನಾಥೇಶ್ವರನ ದರ್ಶನ. ಈ ಮೊದಲು ಅಲ್ಲಿಗೆ ತೆರಳಿದ್ದರೂ ಮಳೆಗಾಲದಲ್ಲಿ ಮರು ಭೇಟಿಗೆ ಯೋಗ್ಯ ಸ್ಥಳವದು...
ಸೇರುವ ಗಮ್ಯಕ್ಕಿಂತ ಸಾಗುವ ಹಾದಿಯೇ ಕೆಲವೊಮ್ಮೆ ಗಮನ ಸೆಳೆದು ಬಿಡುತ್ತವೆ ಎಂಬ ಉಕ್ತಿಗೆ ಇಂಬು ಕೊಡುವಂತೆ , ನಮಗೆ ಹಾದಿಮಧ್ಯ ಸಿಕ್ಕಿದ್ದು ನೀರಝರಿ. ಅದರ ಸೌಂದರ್ಯ ವರ್ಣಿಸಲಸದಳ .
ತಾಯ ಒಡಲಿನಿಂದ ಕೆಳಗಿಳಿವ ಹಾಲ್ಗಲ್ಲದ ಮಗುವಿನಂತೆ....ಅದರ ರೂಪ.
ಬೆಚ್ಚನೆಯ ಗೂಡಲ್ಲಿ ಮರಿಗೆ ಉಣಿಸುವ ತಾಯ ಸ್ಪರ್ಶದ ಸುಖ.
ಬಾಯಾರಿದ ಯಾತ್ರಿಕಗೆ ಅಮೃತದ ಕೊಳ ದೊರಕಿದಂತೆ...
ಹೀಗೆಲ್ಲ ಹೇಳಿದರು ಅದರ ಅನುಭವ ಮಾತ್ರ.....ನೋಡಿಯೇ ಅನುಭವಿಸಿಯೇ ತೀರಬೇಕು...
ಆ ಜಲಧಾರೆಯ ಕಂಡು...ಅವಳ ಅಕ್ಕನನ್ನು ಮಾತಾಡಿಸಿ..
ಇವಳ ತಾಯಿ ಅಜ್ಜಿಯಂದಿರನ್ನು ನೋಡಬೇಕೆಂಬ ಆಶಯಕ್ಕೆ ಸನ್ಮಿತ್ರರಿಂದ ಸಲಹೆಯನ್ನು ಪಡೆದು , ಆಕೆಗೆ ಮತ್ತೆ
ಬರುವವೆಂಬ ವಾಗ್ದಾನ ನೀಡಿ ನಮ್ಮ ಗಮ್ಯದೆಡೆಗೆ ನಡೆದೆವು....