Thursday, 4 May 2017

ಓ ಮನವೇ

ಗತಿಸಿರುವ ಭಾವಗಳ ಹುಡುಕಾಟದಲ್ಲಿ
ಪಡೆದೆ ನಾನೊಂದ , ಮರೆತೆನಾ...ಇನ್ನೊಂದ
ನಂಬಿಕೆಯ ಬುನಾದಿಯ ಪುನಃ ಪ್ರತಿಷ್ಠೆಗೆ
                 ಭಾವಗಳೇ ಅಡಿಪಾಯ...
ತೆರೆದ ಮನಸಲಿ ಬೆಸೆವ ಬಂಧದ
ಅಳಿವೋ .....? ಉಳಿವೋ ....‌? ತಿಳಿಯದು !
ಕಳೆದುಕೊಳ್ಳುವ ಸುಲಭ ಪಡೆಯುವುದರಲ್ಲಿಲ್ಲ...
ಕಳೆದುಕೊಳ್ಳದಿರು ಮನವ ...ಮಾನವ....
.......ಓ ಮನವೇ...‌‌
ಅಂತರಾತ್ಮವ ಸತ್ಯ ಜ್ಯೋತಿಯಿಂ
ನಡೆಸು ನೀ ಧರ್ಮಪಥದಲೀ.....

No comments:

Post a Comment