ಹೀಗೊಂದು ಲೆಕ್ಕಾಚಾರ
ಬೇರೆ ಮೆಡಿಕಲ್ ನಲ್ಲಿ
ನನ್ನ ತಂದೆಯ ಒಂದು ಬಿಪಿ ಮಾತ್ರೆಗೆ 7.6₹
ನನ್ನ ದೊಡ್ಡಮ್ಮನ ಒಂದು ಬಿಪಿ ಮಾತ್ರೆಗೆ 5.8₹
ಜನ್ ಔಷಧಿ ಕೇಂದ್ರದಲ್ಲಿ
ತಂದೆಯ ಒಂದು ಬಿಪಿ ಮಾತ್ರೆಗೆ 2.8₹
ದೊಡ್ಡಮ್ಮನ ಒಂದು ಬಿಪಿ ಮಾತ್ರೆಗೆ 0.9₹
ನಾನು ಇಬ್ಬರಿಗೂ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆ ತಂದಾಗ , ಬೇರೆ ಮೆಡಿಕಲ್ ನಲ್ಲಿ 1340₹ ಹಾಗೂ ಜನ್ ಔಷಧಿಯಲ್ಲಿ 370₹ ಎರಡಕ್ಕೂ ಇರುವ ವ್ಯತ್ಯಾಸ 1340₹ - 370₹= 970₹ , ಸರಿಸುಮಾರು ಒಂದು ಸಾವಿರ ರೂಗಳ ವ್ಯತ್ಯಾಸ.
ಹಾಗಾದರೆ ಒಂದು ವರ್ಷಕ್ಕೆ "3880₹".
( ನಾವು ಈವರೆಗೆ ಮಾತ್ರೆ ತರುತ್ತಿದ್ದ ಮೆಡಿಕಲ್ ಇರುವುದು ಹತ್ತಿರದ ಶಂಕರನಾರಾಯಣದಲ್ಲಿ (4km),
ಆದರೆ ಜನ್ ಔಷಧಿ ಕೇಂದ್ರ ಇರುವುದು ಕುಂದಾಪುರದಲ್ಲಿ(20km). ನಾನು ಈ ಕಾರಣಕ್ಕಾಗಿಯೇ ಕುಂದಾಪುರಕ್ಕೆ ಹೋದರೂ ಅಬ್ಬಬ್ಬಾ ಅಂದರೆ ತಗಲುವ ಖರ್ಚು 200₹ . )
ಇಷ್ಟು ವರ್ಷಗಳಿಂದ ಬಿಪಿ - ಶುಗರ್ ಗಳ ಹೆಸರಿನಲ್ಲಿ ಮೆಡಿಕಲ್ ಗಳ ಮೂಲಕ ಔಷಧ ಕಂಪೆನಿಗಳು ಜನರ ಹಣವನ್ನು ದೋಚುತ್ತಿದ್ದ ಹಣ ........ಎಷ್ಟಾಗಬಹುದು....ಊಹಿಸಲೂ ಕಷ್ಟಸಾಧ್ಯ.
ಕೇವಲ ಇಬ್ಬರಿಗೆ ಒಂದು ವರ್ಷಕ್ಕೆ 3880₹ ಆದರೆ ಭಾರತದಲ್ಲಿ ಕಡಿಮೆಯೆಂದರೂ ಕೇವಲ 40ಲಕ್ಷ ಜನ ಬಿಪಿ ಮಾತ್ರೆಯೊಂದನ್ನೇ ತೆಗೆದುಕೊಳ್ಳುತ್ತಾರೆ ಅಂದುಕೊಂಡರೆ ಅದರ ಮೊತ್ತ.........
(ಮಾತ್ರೆಯ ನಿಜವಾದ ಖರ್ಚಲ್ಲ)
ಅಂದರೆ ಮೆಡಿಕಲ್ ಮಾಫಿಯಾ ಎಂಬ ಮಾಯಾಜಾಲ ಜನರನ್ನು ಸುಲಿಯುತ್ತಿದ್ದ ಹಣದ ಮೊತ್ತ
77600000000 ₹ .(ಏಳುಸಾವಿರದ ಏಳುನೂರಾ ಎಪ್ಪತ್ತಾರು ಕೋಟಿ )
ಇದು ಕೇವಲ ಒಂದು ಮಾತ್ರೆಯಿಂದ ದೋಚಿದ ಹಣ ಅಂದರೆ ನನ್ನಂತಹ ಕೋಟಿ ಜನರ ಒಂದು ವರ್ಷದ ದುಡಿಮೆಗೆ ಸಮ , ಅಥವಾ ಭಾರತದ ನೂರಿಪ್ಪತ್ತೈದು ಕೋಟಿ (125)ಜನರಿಗೆ
ಸುಮಾರು 2-3 ತಿಂಗಳುಗಳ ಕಾಲ ಉಚಿತವಾಗಿ ಊಟ ಕೊಡುವಷ್ಟು ......
ಹಾಗಾದರೆ ಭಾರತದಲ್ಲಿ ಎಷ್ಟು ಕೋಟಿ ಜನ,
ಎಷ್ಟು ವರ್ಷಗಳಿಂದ , ಇಂತಹ ಎಷ್ಟು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರಬಹುದು..ಅದರ ಮೊತ್ತ ಎಷ್ಟಾಗಬಹುದು.
( ಹಾಗೇ ಆಲೋಚಿಸಿದರೆ... ಸುಮಾರು 40 ಕೋಟಿ ಜನ ಕೇವಲ ಬಿಪಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಅಂದುಕೊಂಡರೆ ಒಂದು ವರ್ಷದ ಮೊತ್ತ 7.76e11₹.
ಹಾಗಾದರೆ 5 ಮಾತ್ರೆ 5ವರ್ಷಗಳಿಂದ ಎಂದು ಲೆಕ್ಕ ಮಾಡಿದಾಗ ಅದರ ಮೊತ್ತ 1.94e13 ₹ )
(ಈ ಮೊತ್ತಗಳನ್ನು Calculator ನಲ್ಲಿ ಕಾಣಬಹುದು.)
ಹಾಗೆ ಬಿಪಿ,ಶುಗರ್ , ಕ್ಯಾಲ್ಸಿಯಂ ಹೀಗೆ ಹತ್ತು ಹಲವಾರು ಕಾಯಿಲೆಗಳ ಸೋಗಿನಲ್ಲಿ ಜನರನ್ನು ದೋಚುತ್ತಿದ್ದ , ದೋಚುತ್ತಿರುವ ನಾವು ಹೀಗೇ ಮುಂದುವರೆದರೆ ಮುಂದೆಯೂ ದೋಚಬಹುದಾದ ಹಣದ ಮೊತ್ತ ಎಷ್ಟಾಗಬಹುದೆಂದು ಊಹಿಸಲೂ ಅಸಾಧ್ಯ. )
ಕೊನೆಯ ಮಾತು.
ಸಾಧ್ಯವಾದಷ್ಟು ಜನ್ ಔಷಧಿ ಕೇಂದ್ರದಲ್ಲಿ ಔಷಧಗಳನ್ನು ಸ್ವೀಕರಿಸಿ , ನಿಮ್ಮ ಊರಿನಲ್ಲಿಯೂ ಕೇಂದ್ರದ ಸ್ಥಾಪನೆಗೆ ಮನವಿ ಸಲ್ಲಿಸಿ.
(ವಿ .ಸೂ . ಕೇವಲ ಸಾಮಾನ್ಯ ವ್ಯಕ್ತಿಯಾಗಿ ಕೇಂದ್ರ ಸರಕಾರದ ಈ ಜನ್ ಔಷಧಿ ಯೋಜನೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಬರೆದಂಥ ಲೇಖನವೇ , ಹೊರತಾಗಿ ಯಾವುದೇ ಪಕ್ಷ , ವ್ಯಕ್ತಿಯ ಹೊಗಳಿಕೆಯ ಅಥವಾ ಪ್ರಚಾರದ ಕುರಿತಾದದ್ದಲ್ಲ.)
📝 ಪದ್ಮನಾಭ ಅಡಿಗ
(9483917526)
Wednesday, 15 August 2018
ಔಷಧ ಕಂಪೆನಿಗಳ ಕರಾಳ ಮಾಫಿಯಾ ಮುಖವಾಡ.
Subscribe to:
Post Comments (Atom)
No comments:
Post a Comment