ಆತ ಇಬ್ಬರು ಹೆಂಡಂದಿರ ಮುದ್ದಿನ ಗಂಡ .ಈರ್ವರಿಗೂ ಅವಳಿ ಮಕ್ಕಳು , ಏಳು ಜನರ ತುಂಬು ಸಂಸಾರವದು.
ಎಲ್ಲೋ ಹುಟ್ಟಿ ಇನ್ನೆಲ್ಲೂ ಬೆಳೆದು ಗಂಡನ ಮನೆ ಸೇರಿದ ಆ ಇಬ್ಬರು ಅನಾಥ ಹೆಣ್ಣು ಮಕ್ಕಳಿಗೆ ಆಶ್ರಯ ನೀಡಿ , ಬೆಳೆಸಿದ ಪೋಷಕರು ಹೇಳುವುದು...ಆಹಾ ಇಬ್ಬರಿಗೂ ಒಂದು ಗಂಡು ಸಿಕ್ಕರೆ ಒಳ್ಳೆಯದಾಗುತ್ತಿತ್ತು.
ಅದು ಅವರ ಹರಕೆಯೋ , ಆ ಹೆಮ್ಮಕ್ಕಳ ಸುಕೃತವೋ.
ಸ್ವಂತ ಅಕ್ಕತಂಗಿಯರ ಹಾಗೆ ಬೆಳೆದ ಅವರು ಒಬ್ಬ ಗಂಡನ ಮುದ್ದಿನ ಹೆಂಡಂದಿರಾಗಿ ಮುಂದೆಯೂ ಕೂಡಾ ಸವತಿಯರಾಗದೆ , ಜಗಳ ಮಾಡದೇ ಬದುಕುತ್ತಿದ್ದವರು. ಅಕ್ಕ ಗುಲಾಬಿ ತನ್ನ ತಂಗಿಯಾದ ನೀಲುವಿನ ಮಕ್ಕಳನ್ನು ತನ್ನ ಸ್ವಂತ ಮಕ್ಕಳಂತೆ ಹಾಲುಣಿಸಿ ಬೆಳೆಸಿದವಳು.ಅಕ್ಕರೆಯಿಂದ ಕಂಡವಳು, ಮಡಿಲಲಿ ಜೋಪಾನ ಮಾಡಿ ಬೆಳೆಸಿದವಳು.ಕೇವಲ ಹತ್ತು ದಿನ ಅಂತರದಲ್ಲಿ ಹುಟ್ಟಿದ ಆ ಮಕ್ಕಳ ಆಟ ಕಂಡು ಸ್ವರ್ಗವೇ ನಾಚುತ್ತಿತ್ತು...
ಆದರೆ ಆ ಜಡಿ ಮಳೆಯ ಕಾರ್ಮುಗಿಲ ರಾತ್ರಿಯ ಕೊನೆಯ ಗಳಿಗೆಯಲ್ಲಿ ಜವರಾಯ
ಅಪ್ಪನ ಸ್ವರೂಪದಲ್ಲಿ ಆ ಮಕ್ಕಳ ಮೇಲೆ ಎರಗಿಬಿಟ್ಟಿನೆ....!!!
ಆ ಮಕ್ಕಳು ಮಾಡಿದ್ದಾದರೂ ಏನು.
ತಾಯಿಯ ಪ್ರೀತಿ ಬಯಸಿದ್ದೆ ಅವುಗಳಿಗೆ ಮುಳುವಾಯಿತೇ..
ಅಯ್ಯೋ ..
ಇಂತಹ ಅಪ್ಪನಿರುವನೆ....ಈ ಭೂಲೋಕದಲ್ಲಿ.
ಹೆಂಡತಿಯ ಪ್ರೀತಿ ಮಕ್ಕಳೆಡೆಗೆ ಮಾತ್ರ ಹರಿಯುತ್ತಿದೆ , ತನ್ನ ಕಡೆ ಗಮನ ಕೊಡುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ನಡೆದೆಹೋಯ್ತು ಆ ಕಗ್ಗೊಲೆ..
ಹೇ ವಿಧಿಯೇ....
ಬೆಳಗ್ಗೆ ಮಕ್ಕಳ ಅಳು ಕೇಳುವುದಿಲ್ಲವಲ್ಲ ಎಂಬ ದುಗುಡದಿಂದ ಧಾವಿಸಿದರೆ , ಕಾಣಲು ಇನ್ನೇನು ಉಳಿದಿದೆ....ಅಯ್ಯೋ ದುರ್ವಿಧಿಯೇ.
ಯಾವ ರುಂಡಕೆ ಯಾವ ಕೈ ಕಾಲುಗಳು ಎಂದು ಗುರುತೇ ಸಿಗದಷ್ಟು ಚಿತ್ರ ವಿಚಿತ್ರವಾಗಿ ಕಗ್ಗೊಲೆ ಮಾಡಿಬಿಟ್ಟಿದ್ದ ಆ ಅಪ್ಪನೆನಿಸಿಕೊಂಡಾತ.
.
.
.
.
.
ಇನ್ನೇನು ಹೇಳಲು ಉಳಿದಿಲ್ಲ ..ಅಂತ್ಯ ಸಂಸ್ಕಾರಗಳನ್ನು ಮುಗಿಸಿ ಮನೆಗೆ ಬಂದರೆ, ನಗುವಿನಲೆಯಿದ್ದ ಮನೆಯಿಂದು ಮಸಣದ ವಾಸನೆಯಿಂದ ಕರಟುತ್ತಿದೆ...
ಎದೆಯಲ್ಲಿ ಪ್ರತೀಕಾರದ ಅಗ್ನಿ ಉರಿಯುತ್ತಿದೆ.
....
...
...
...
...
...
...
....
....
...
( ಸಂಜೆ ವೇಳೆಗೆ ಮನೆಗೆ ಮಿಯಾವ್ ಎಂದು ಕಳ್ಳನ ಹಾಗೆ ನುಗ್ಗಲು ಬಂದ ಆ ಅಪ್ಪ ಬೆಕ್ಕನ್ನು ಕೋಲಿನಿಂದ ರಪರಪನೆ ಬಾರಿಸಿ , ಪ್ರತೀಕಾರವನ್ನು ತೀರಿಸಿಕೊಂಡೆವು )
No comments:
Post a Comment